ವಿಷಯಕ್ಕೆ ಹೋಗಿ

ನಾಂದಿ

ಅದೆಷ್ಟೋ ಸಂಬಂಧಗಳು ಶುರುವಾಗುವುದೇ ಚಿಕ್ಕ ಕಥೆಗಳಿಂದ, ಮುಂದೊಮ್ಮೆ ಅದನ್ನು ಮೆಲಕು ಹಾಕಬೇಕೆಂದು ನೋಡಿದರೆ, 'ಅಯ್ಯೋ ಇದನ್ನ ಒಂದು ಒಳ್ಳೆ ಸಿನಿಮಾನೇ ಮಾಡಬಹುದು' ಅಂತ ಬಹಳಷ್ಟು ಬಾರಿ ಹಾಸ್ಯಕ್ಕೆ ನನ್ನ ಸ್ನೇಹಿತರೊಡನೆ ಹಂಚಿಕೊಂಡ ಘಟನೆಗಳು ಇದೆ.  ಹೀಗೆ ಓದಿದ, ಕೇಳಿದ ಹಾಗೂ ಅನುಭವಗಳಾದ ಘಟನೆಗಳು ಕಥೆಯಾಗಿ ನಮ್ಮಲ್ಲಿ ಉಳಿದುಬಿಡುತ್ತವೆ .


ಕಥೆ ಹಳೆಯದಾದರೇನು ಸ್ವಾಮಿ, ಕೇಳೋಣ ಬನ್ನಿ. 

ಹೀಗೆ ಸರ್ಕಾರಿ ನೌಕರಿಯಲ್ಲಿದ್ದ ನಮ್ಮ ತಾತ ವರ್ಗಾವಣೆಯಾಗ್ತಿದ್ದ ಸಮಯದಲ್ಲೆಲ್ಲ ಆದ ಅನುಭವಗಳನ್ನು ಬರವಣಿಗೆಯ ಮೂಲಕ ಮಾಸಪತ್ರಿಕೆಗಳಲ್ಲಿ ಹರಿಬಿಟ್ಟರೇನೋ... ಆಗಿನ ಕಾಲಕ್ಕೆ 'ಹವ್ಯಾಸಕ್ಕೆ' Netflix ಅಥವಾ Amazon Prime ಇರ್ಲಿಲ್ಲ ನೋಡಿ, ಪ್ರಾಯಶಃ ಹಾಳೆ ಮತ್ತು ಪೆನ್ನು ವ್ಯಕ್ತಪಡಿಸಿರಬಹುದು.

ನಿತ್ಯ ಬದಲಾಗುತ್ತಿರುವ ಕಾಲಕ್ಕೆ ಎಲ್ಲಿ ಮಾಧ್ಯಮಗಳೇ ಮನಸ್ಸುಗಳನ್ನು ಚಾಲನೆ ಮಾಡುತ್ತಿರುವ ಸೋ೦ಕಿಗೆ, ಮತ್ತಿಷ್ಟು ಕಥೆಗಳನ್ನು ಪುಸ್ತಕದ ರೂಪದಲ್ಲಿ ಹರಿಬಿಡುವ ಪ್ರಯತ್ನ. ಇಲ್ಲಿರುವ ಕಥೆಗಳು ಘಟನೆಗಳು ಓದುಗರಲ್ಲಿ ಒಂದು ಒಳ್ಳೆಯ ಪ್ರಭಾವವನ್ನು ಬೀರಬಹುದೆಂದು, ಹಾಸ್ಯಪ್ರಜ್ಞೆ ಮೊಳಕೆ ಯೊಡೆಯಬಹುದೆಂದು, ಕಲಾವಿದನಲ್ಲಿ ಭಾವ ಮೂಡಲೆಂದು, ಸಾಹಿತ್ಯಾಸಕ್ತಿಗೆ ಕಿಚ್ಚು.


ಹಚ್ಚಲೆಂದು, ಹುಚ್ಚುತನದಿಂದ ಸಂಗ್ರಹಿಸಿ ಸ್ವಾರಸ್ಯಕರ ಚಿತ್ರಗಳೊಡನೆ ಕಲೆಹಾಕಿ ಕಾರ್ಯರೂಪಕ್ಕೆ ನಿಮ್ಮ ಮುಂದೆ 'ಈ ಪುಸ್ತಕ' ಹಾಗೂ 'ಪುಸ್ತಕ' .

ನಿಮ್ಮ ಸಹನೆ, ಪ್ರೋತ್ಸಾಹ, ಕಿವಿಮಾತು ಎಲ್ಲವನ್ನು ತೆಗೆದುಕೊಳ್ಳುತ್ತಾ ನನ್ನ ಪ್ರಯಾಣಕೊಂದು 'ನಾಂದಿ'. 


ಬನ್ನಿ ಶುರು ಮಾಡೋಣ.